Lecture 34 ಕನ್ನಡ ಮಾಧ್ಯಮ ಸೂರ ಸಂತತಿ
ಪ್ರಶ್ನೆ 1. ಸೂರ ಸಂತತಿ - ಕ್ರಿ.ಶ 1540 - 1545 ಬಗ್ಗೆ ತಿಳಿಸಿ
ಇವರು ಮೂಲಕ ಅಪಘಾನಿಸ್ತಾನದ ಸೂರ ಪಂಗಡಕ್ಕೆ ಸೇರಿದವರು.
ಪ್ರಶ್ನೆ 2. ಶೇರ್ ಷಾ ಸೂರಿ ಕ್ರಿ.ಶ 1540- 1545 ಬಗ್ಗೆ ತಿಳಿಸಿ
ಈತ ಸೂರ ಸಂತತಿಯ ಸ್ಥಾಪಕ
1.ಈತನಿಗೆ ಭಾರತದ ರೂಪಾಯಿಗಳ ಜನಕ ಅಥವಾ ರೂಪಾಯಿಗಳ ರಾಜ ಎಂದು ಕರೆದವರು - ಎಡ್ವಡ೯ ಥಾಮಸ್.
2. ಇವನ ಮೂಲ ಹೆಸರು - ಫರೀದ್
3.ಕ್ರಿ.ಶ 1472 ರಲ್ಲಿ ಜನಿಸಿದನು.
4. ಇವನ ತಂದೆ ಹೆಸರು - ಹಸನ ಖಾನ್
5. ಹಸನ್ ಖಾನನಿಗೆ 4 ಜನ ಪತ್ನಿಯರಿದ್ದರು.
6. ಫರೀದ್ ತನ್ನ ಮಲ ತಾಯಿಯ ಕಿರುಕುಳ ತಾಳಲಾರದ ತನ್ನ 22 ನೆ ವಯಸ್ಸಿನಲ್ಲಿ ಬಿಹಾರದ ಒಡೆಯ ಬಹರ್- ಖಾನ್ - ಲೋಹಾನಿಯ ಆಸ್ಥಾನದಲ್ಲಿ ಕೆಲಸಕ್ಕೆಂದು ಸೇರಿಕೊಂಡನು
7. ಏಕಾಂಗಿಯಾಗಿ ಹುಲಿಯನ್ನು ಕೊಂದಿದ್ದ ಅದಕ್ಕಾಗಿ ಬಹರ್ ಖಾನ್ ಲೋಹಾನಿ ಇವನಿಗೆ ಶೇರಖಾನ್ ಎಂಬ ಬಿರುದು ನೀಡಿದನು.
8. ಕ್ರಿ.ಶ .1540 ರ ಬಿಲ್ಲಗಾಂ ಅಥವಾ ಕನೋಜ ಕಾಳಗದ ಮೂಲಕ ದೆಹಲಿ ಸಿಂಹಾಸನ ಏರಿದನು.
9. ಕ್ರಿ.ಶ 1541 ರಲ್ಲಿ ಘಕ್ಕಾರ ಎಂಬ ಬುಡಕಟ್ಟಿನ ಜನಾಂಗವರನ್ನು ಸೊಲಿಸಿ ಜೀಲಂ ನದಿಯ ದಂಡೆಯ ಮೇಲೆ ರೋಹಗಸ್ಥಗರ ಎಂಬ ಕೋಟೆಯನ್ನು ನಿಮಿ೯ಸಿದನು.
10 . ಕ್ರಿ.ಶ 1542 ರಲ್ಲಿ ಮಾಳ್ವದ ರೈಸಿನ್ ಕೋಟೆಯ ಮೇಲೆ ದಾಳಿ ಮಾಡಿ ಅರಸ ಪೂರಣ ಮಲ್ಲನನ್ನು ಕೊಲೆ ಮಾಡಿ ಅವನ ಚಿಕ್ಕ ವಯಸ್ಸಿನ ಮಗಳನ್ನು ಡೊಂಬರಾಟದವರಿಗೆ ಮಾರಾಟ ಮಾಡಿದನು.
11. ಕ್ರಿ.ಶ 1545 ರಲ್ಲಿ ರಾಜಾ ಕಿರತ ಸಿಂಗ್ ನ ವಶದಲ್ಲಿದ್ದ ಕಾಂಜರ್ ಕೋಟೆಯನ್ನು ವಶಪಡಿಸಿಕೊಳ್ಳುವ ಸಂದಭ೯ದಲ್ಲಿ ಸಿಡಿಮದ್ದಿನ ಸ್ಫೋಟಕ್ಕೆ ಬಲಿಯಾದನು.
12. ಈತನ ಸಮಾಧಿ ಸ್ಥಳ ಬಿಹಾರದ ಸಸಾರಾಮ್ ದಲ್ಲಿದೆ.
ಪ್ರಶ್ನೆ 3. ಶೇರ ಷಾ ನ ಅಡಳಿತ ಬಗ್ಗೆ ತಿಳಿಸಿ
1. ಅರಸ ಆಡಳಿತದ ಕೇಂದ್ರ ಬಿಂದು ಅಗಿದ್ದ
2. ಅಂತಿಮ ನ್ಯಾಯ ನಿಡುವ ನ್ಯಾಯಾಧೀಶನಾಗಿದ್ದ
3.ಶೇರ್ ಷಾ ಅಡಳಿತದ ಅನೂಕೂಲಕ್ಕಾಗಿ
4. ರಾಜ್ಯ - ಸಕಾ೯ರ - ಪರಗಣ- ಶೇಖದಾರ - ಗ್ರಾಮ - ಚೌಕಿದಾರ ಎಂದು ವಿಭಾಗಿಸಿದ್ದನು
5. ಶೇರ್ ಷಾ ತನ್ನ ಆಡಳಿತಲ್ಲಿ ಪಟ್ಟಾ ಎಂಬ ಪದ್ದತಿ ಜಾರಿಗೆ ತಂದನು.
ಪಟ್ಟಾ -ಕಂದಾಯ ವಿವರಣೆ ಬರೆದಿಡುವ ಪುಸ್ತಕ
6. ಭೂ ಮಾಪನಕ್ಕಾಗಿ ಸಿಕಂದರ್ ಗಜ್ಜ ಎಂಬ ಸಾಧನವನ್ನು ಬಳಸಿದನು.
7. ಕೃಷಿಗೆ ಯೋಗ್ಯವಾದ ಭೂಮಿಯನ್ನು ಉತ್ತಮ ಮಧ್ಯಮ ಮತ್ತು ಕನಿಷ್ಟ ಎಂಬ ವಿಭಾಗಗಳಾಗಿ ವಿಭಾಗಿಸಿದ್ದನು.
8. ಈತನ ಆಡಳಿತದಲ್ಲಿ 47 ಸಕಾ೯ರಗಳಿದ್ದವು.
9. ತನ್ನ ಕಂದಾಯ ಇಲಾಖೆಯಲ್ಲಿ ರಾಜಾ ತೋದರ ಮಲ್ಲನನ್ನು ನೇಮಿಸಿದನು.
10. ತನ್ನ ಆಡಳಿತದಲ್ಲಿ ಕೊತ್ವಾಲ್ ಎಂಬ ಪೊಲೀಸ್ ಅಧಿಕಾರಿಯನ್ನು ನೇಮಿಸಿದನು.
11. ಶೇರ್ ಷಾ ತನ್ನ ಅಡಳಿತದಲ್ಲಿ 4 ಪ್ರಮುಖ ರಸ್ತೆಗಳನ್ನು ನಿಮಿ೯ಸಿದನು.
12. ಶೇರ್ ಷಾ ರಸ್ತೆಗಳ ಸುರಕ್ಷತೆಗಾಗಿ ಶೀಘ್ರ ಸಂದೇಶ ಕಲ್ಪಿಸುವ ಉದ್ದೇಶದಿಂದ ದರೋಗ - ಇ- ಡಾಕ್ ಚೌಕಿ ಎಂಬ ಕೇಂದ್ರ ಸ್ಥಾಪಿಸಿದನು.
13. ಶೇರಷಾನ ನಂತರ ಇಸ್ಲಾಂ ಷಾ, ಸಿಕಂದರ ಷಾ, ಇಬ್ರಾಹೀಂ ಆಳ್ವಿಕೆ ಮಾಡಿದರು. ಇವರ ಕಾಲದಲ್ಲಿ ಹಿಂದೂ ಮಂತ್ರಿ ಹೇಮು ದೆಹಲಿಯನ್ನು ವಶಪಡಿಸಿಕೊಂಡು ಆಡಳಿತ ಮಾಡಿದನು. ದೆಹಲಿಯನನ್ನಾಳಿದ
ಕೊನೆ ಹಿಂದೂ ದೊರೆ ಹೇಮು.