Lecture 38 ಕನ್ನಡ ಮಾಧ್ಯಮ ಶಿವಾಜಿ
ಪ್ರಶ್ನೆ1. ಶಿವಾಜಿ ಕ್ರಿಶ. 1627- 1680 ಬಗ್ಗೆ ತಿಳಿಸಿ
1. ಕ್ರಿ.ಶ 1627 ರಲ್ಲಿ ಪುಣೆ ಜಿಲ್ಲೆಯ ಶಿವನೇರಿ ದುಗ೯ ಎಂಬ ಗ್ರಾಮದಲ್ಲಿ
ತಂದೆ- ಷಹಜಿ ಬೊಸ್ಲೆ
ತಾಯಿ- ಜಿಜಾಬಾಯಿ
ಶಸ್ತ್ರಾಸ್ತ್ರ ವಿದ್ಯಾ ಗುರು - ದಾದಾಜಿಕೊಂಡದೇವ
ಆಧ್ಯಾತ್ಮಿಕ ಗುರು - ರಾಮದಾಸ
2. ಶಿವಾಜಿ ತನ್ನ 16 ನೆ ವಯಸ್ಸಿನಲ್ಲಿ ಮೊಘಲರ ಒಂದು ಪ್ರಬಲವಾದ ಸಾಮ್ರಾಜ್ಯ ನಿಮಿ೯ಸುವ ಕನಸು ಹೊಂದಿದ್ದನು.
3.ಕ್ರಿಶ. 1646 ರಲ್ಲಿ ಬಿಜಾಪುರದ ಸುಲ್ತಾನನ ವಶದಲ್ಲಿದ್ದ ತೋರಣ ದುಗ೯ ಪ್ರತಾಪಗಡ, ರಾಯಗಡ, ಮತ್ತು ಕೊಂಡಾನ ಎಂಬ ಪ್ರದೇಶಗಳನ್ನು ವಶಪಡಿಸಿಕೊಂಡನು. ಆಗ ಬಿಜಾಪುರದ ಸುಲ್ತಾನ ಷಹಜಿ ಬೋಸಲೆಯನ್ನು ಬಂದನದಲ್ಲಿಟ್ಟನು. ಆಗ ಶಿವಾಜಿ ತಂದೆಯ ಬಿಡುಗಡೆಗಾಗಿ ಕೊಂಡಾಣ ಕೊಟೆ ಬಿಟ್ಟುಕೊಟ್ಟನು.
4. ಕ್ರಿ.ಶ 1659 ರಲ್ಲಿ ಬಿಜಾಪುರದ ಸುಲ್ತಾನ 2ನೇ ಆಲಿ ಆದಿಲ್ ಷಾಹಿಯ ದಂಡನಾಯಕ ಆಫ್ಜಲಖಾನನ್ನು ತನ್ನ ವ್ಯಾಘ್ರನಖದಿಂದ ಹೊಟ್ಟೆ ಹರಿದು ಕೊಲೆ ಮಾಡಿದನು. (ಪ್ರತಾಪಗಡದ ವಾಹಿ ಬಳಿ)
5. ಕ್ರಿಶ. 1663 ರಲ್ಲಿ ಔರಂಗಜೇಬ ಶಿವಾಜಿಯ ವಿರುದ್ದ ತನ್ನ ಅಳಿಯ ಶಾಯಿಸ್ತಾಖಾನನ್ನು ಕಳುಸಿದನು. ಈ ಸೈನ್ಯವನ್ನು ಶಿವಾಜಿ ತನ್ನ ಗೆರಿಲ್ಲಾ ಯುದ್ದ ತಂತ್ರದ ಮೂಲಕ ಸದೆ ಬಡಿದನು.
6. ( ಶಾಯಿಸ್ತಾಕ ಖಾನ್ ತನ್ನ ಕೈಬೆರಳು ಕಳೆದುಕೊಂಡು ಓಡಿ ಹೋದನು)
7.ಕ್ರಿ.ಶ 1665 ರಲ್ಲಿ ಔರಂಗಜೇಬ ಜಯಸಿಂಗ್ ಮತ್ತು ದುಲೀಪ್ ಸಿಂಗ್ ನೇತೃತ್ವದಲ್ಲಿ ಮತ್ತೊಂದು ಪ್ರಬಲವಾದ ಸೈನ್ಯ ಕೊಟ್ಟು ಕಳುಹಿಸಿದನು. ಈ ಸೈನ್ಯ ಶಿವಾಜಿಯ ಎಲ್ಲಾ ಪ್ರದೇಶಗಳನ್ನು ವಶಪಡಿಸಿಕೊಳ್ಳುತ್ತಾ ಪುರಂದರಗಡಕ್ಕೆ ಬಂದು ತಲುಪಿತು.
8.ಕ್ರಿ.ಶ 1665 ಜುನ್ 22 ರಂದು ಪುರಂದರಗಡ ಒಪ್ಪಂದಕ್ಕೆ ಸಹಿ ಹಾಕಿ 23 ಕೋಟೆಗಳು ಮೊಘಲರಿಗೆ ಒಪ್ಪಿಸಿ ಅಡಳಿತದ ಸಮಸ್ತ ಜವಬ್ದಾರಿ ಎಲ್ಲವೂ ತನ್ನ ತಾಯಿ ಜಿಜಾಬಾಯಿಗೆ ವಹಿಸಿ, ಜೈಸಿಂಗನ ಮಾತಿನಂತೆ ತನ್ನ ತಾಯಿ ಜೀಜಾಬಾಯಿಗೆ ವಹಿಸಿ, ಜಯಸಿಂಗನ ಮಾತಿನಂತೆ 1666 ಮಾಚ್‌೯ 16 ರಂದು ತನ್ನ ಮಗನ ಸಂಭಾಜಿಯೊಂದಿಗೆ ಆಗ್ರಾ ನಗರಕ್ಕೆ ತೆರಳಿದನು. ಅಲ್ಲಿ ಶಿವಾಜಿಗೆ ಅವಮಾನಗೊಳಿಸಿ ಬಂಧನದಲ್ಲಿಡಲಾಯಿತು.
9. ಕ್ರಿ.ಶ. 1666 ನವೆಂಬರ 30 ರಂದು ತನ್ನ ಮಗ ಸಂಬಾಜಿಯೊಂದಿಗೆ ಹಣ್ಣಿನ ಬುಟ್ಟಿಯಲ್ಲಿ ಕುಳಿತು ಔರಂಗಜೇಬನ ಬಂಧನದಿಂದ ಪಾರಾದನು.
10. ಔರಂಗಜೇಬನ ಬಂಧನದಿಂದ ಪಾರಾದ ಶಿವಾಜಿ ಮೊಘಲರ ವಶದಲ್ಲಿದ್ದ ಎಲ್ಲಾ ಕೊಟೆಗಳನ್ನು ಪುನ: ವಸಪಡಿಸಿಕೊಂಡನು.
11. ಕ್ರಿಶ 1670 ರಲ್ಲಿ ಮರಾಠರ ಪ್ರಸಿದ್ದ ದಳಪತಿ ಮತ್ತು ಶಿವಾಜಿಯ ಆಪ್ತ ಸ್ನೇಹಿತ ತಾನಾಜಿ ಮಲ್ಸೂರೇ ಎಂಬಾತನು ಮೊಘಲರ ವಿರುದ್ದ ವೀರ ವೇಶದಿಂದ ಹೋರಾಡಿ ಸಿಂಹಗಡ ಎಂಬ ಕೋಟೆಯನ್ನು ವಸಪಡಿಸಿಕೊಂಡು ಮರಣ ಹೊಂದಿದನು. ಆಗ ಆಪ್ತ ಸ್ನೆಹಿತನ ಮರಣವನ್ನು ಕುರಿತು ಶಿವಾಜಿ ಕೋಟೆಯನ್ನು ಗೆದ್ದುಕೊಂಡೆ ಆದರೆ ಸಿಂಹವನ್ನು ಕಳೆದುಕೊಂಡೆ ಎಂದನು.
12. ಕ್ರಿ ಶ. 1672 ರಲ್ಲಿ ಶಿವಾಜಿ ಸಲ್ಹರ್ ಎಂಬ ಕದನದಲ್ಲಿ ಮೊಗಲರ ಸೈನ್ಯವನ್ನು ಸಂಪೂಣ೯ವಾಗಿ ಸೋಲಿಸಿದನು. ಆಗ ಔರಂಗಜೇಬ ಶಿವಾಜಿಗೆ ರಾಜಾ ಎಂಬ ಬಿರುದು ನೀಡಿದನು.
13. ಕ್ರಿಶ. 1674 ಜುನ್ 16 ರಂದು ಶಿವಾಜಿಗೆ ರಾಯಗಡದಲ್ಲಿ ಪಟ್ಟಾಭಿಷೇಕವಾಗಿ ವತ್ರಪತಿ ಎಂಬ ಬಿರುದು ನಿಡಲಾಯಿತು.
14. ಕ್ರಿ.ಶ 1680 ರಲ್ಲಿ ಭುಜದ ಕ್ಯಾನ್ಸರಿನಿಂದ ಮರಣ ಹೊಂದಿದನು.
15. ಸಮಾಧಿ ಸ್ಥಳ - ರಾಯಗಡದಲ್ಲಿದೆ.