Lecture 50 ಕನ್ನಡ ಮಾಧ್ಯಮ 1ನೇ, 2ನೇ, 3ನೇ ಕಾನ೯ಟಿಕಯುದ್ದಗಳು

  ಕಾನ೯ಟಿಕಯುದ್ದಗಳು 

ಪ್ರಶ್ನೆ 1.  1ನೇ ಕಾನಾ೯ಟಕ್‌ ಯುದ್ದ (ಕ್ರಿ.ಶ 1746 - 1748) ಕಾರಣಗಳು ಯಾವುವು?


1. ಯೂರೋಪಿನಲ್ಲಿ ಫ್ರೆಂಚರ & ಬ್ರಿಟಿಷರ ಮಧ್ಯ ನಡೆದ ಆಸ್ಟ್ರೀಯಾ ಉತ್ತರಾಧಿಕಾರತ್ವದ ಕದನ.

2. ದಖನ್‌ ಪ್ರಾಂತ್ಯದಲ್ಲಿರುವ ರಾಜಕೀಯ ಅಸ್ಥಿರತೆ

ಯುದ್ದಗತಿ

1. ಕ್ರಿ.ಶ 1746 ರಲ್ಲಿ ಬ್ರಿಟಿಷರ ಸೇನಾನಿ ಬಾನೆ೯ಟ್‌ ಫ್ರೆಂಚರ್‌ ಹಡುಗುಗಳನ್ನು ವಶಪಡಿಸಿಕೊಂಡು ಫ್ರೆಂಚರ ನೆಲೆಯಾದ ಪಾಂಡಿಚೇರಿಯನ್ನು ಆಕ್ರಮಿಸುತ್ತಾನೆ. ‌ಆಗ ಉತ್ಸಾಹಿ ಫ್ರೆಂಚ್‌ ಗವನ೯ರ್ ಡೂಪ್ಲೆ ತನ್ನಲ್ಲಿ ನೌಕಾಬಲ ಇಲ್ಲದಿದ್ದರೂ ಮಾರಿಸಿಸ್ ನ ಫ್ರೆಂಚ್‌ ಗವನ೯ರ್‌ ಲಾಬೋಡೆ೯ ನಾಯಿಸ್ ನ ಸಹಾಯದಿಂದ ಮದ್ರಾಸನ್ನು ಅಕ್ರಮಿಸಿ ವಶಪಡಿಸಿಕೊಂಡನು.

2. ಆಗ ಮದ್ರಾಸ್ ನ  ಬ್ರಿಟಿಷ್‌ ಗವನ೯ರ್‌ ಮೊಸ್‌೯ ಫ್ರೆಂಚರಿಗೆ  ಶರಣಾದನು.

3. ಬ್ರಿಟಿಷರ ಸ್ನೇಹಿತನಾದ ಅನ್ವರುದ್ದಿನ್‌ ಮದ್ರಾಸ್ ನ್ನು ಬ್ರಿಟಿಷರಿಗೆ ಹಿಂದಿರುಗಿಸುವಂತೆ ಡೂಪ್ಲೆಗೆ ಆದೇಶ ನೀಡುತ್ತಾನೆ. ಡೂಪ್ಲೆ ಅದನ್ನು ತಿರಸ್ಕರಿಸುತ್ತಾನೆ.

4. ಡೂಪ್ಲೆ ಮತ್ತು  ಅನ್ವರುದ್ದಿನ್‌  ಮಧ್ಯ 1748 ರಲ್ಲಿ ಅಡಿಯಾರ್‌ ಕದನ ಅಥವಾ ಸೇಂಟ್‌ ಥೋಂ ಕದನ ನಡೆಯುತ್ತದೆ. ಈ ಯುದ್ದದಲ್ಲಿ ಅನ್ವರುದ್ದಿನ್‌ ಸೋಲುತ್ತಾನೆ.


ಒಪ್ಪಂದ (ಕ್ರಿ.ಶ 1748)

1748 ರಲ್ಲಿ ಆಸ್ಟ್ರೀಯಾ ಉತ್ತರಾಧಿ ಕಾರತ್ವದ ಕದನ ಎಕ್ಸ್-‌ ಲಾ- ಚಾಪಲ್ ಒಪ್ಪಂದದೊಂದಿಗೆ 1ನೇ ಕನಾ೯ಟಕ್‌ ಯುದ್ದವು ಮುಕ್ತಾಯವಾಗುತ್ತದೆ.


ಒಪ್ಪಂದ ಕರಾರುಗಳು

1. ಫ್ರೆಂಚರು ಬ್ರಿಟಿಷರಿಗೆ ಮದ್ರಾಸನ್ನು ಮರಳಿ ಕೊಟ್ಟರು.

2. ಅದಕ್ಕೆ ಪ್ರತಿಯಾಗಿ ಬ್ರಿಟಿಷರು ಅಮೇರಿಕಾದಲ್ಲಿರುವ ಲೂಯಿಸ್‌ ಬಗ್‌೯ ಅನ್ನು ಬಿಟ್ಟರು ಕೊಟ್ಟರು


 ಪ್ರಶ್ನೆ 2.  2ನೆ ಕನಾ೯ಟಕ್‌ ಯುದ್ದ (ಕ್ರಿ.ಸ . 1749 - 1754) ಬಗ್ಗೆ ತಿಳಿಸಿ


1. ಹೈದ್ರಾಬಾದ & ಆಕಾ೯ಟಗಳಲ್ಲಿ ಉತ್ತರಾಧಿಕಾರತ್ವದ ಸಂಘಷ೯ವೇ 2 ನೇ ಕಾನಾ೯ಟಿಕ್‌ ಯುದ್ದಕ್ಕೆ ಕಾರಣ.

2. ಕ್ರಿ.ಶ 1748 ರಲ್ಲಿ ಅಸಬ್‌ ಜಾ ಸಾವನ್ನಾಪ್ಪಿದಾಗ ಹೈದರಾಬಾದ್ ನ ಉತ್ತರಾಧಿಕಾರತ್ವಕ್ಕಾಗಿ ಆಸಬ್‌ ಜಾನ ಮಗ ನಾಸಿರಜಂಗ್‌ ಮತ್ತು ಅವನ ಮೊಮ್ಮಗ ಮುಜಫರ್ ಜಂಗ್‌ ಮಧ್ಯ ಸಂಘಷ೯ ಏಪ೯ಟ್ಟಿತು.

3. ಇತ್ತ ಮರಾಠದಿಂದ ಬಿಡುಗಡೆಯಾದ ಚಂದಾಸಾಹೇಬನಿಗೆ ಫ್ರೆಂಚರು ಬೆಂಬಲಿಸಿದರೆ ಬ್ರಿಟಿಷರು ನಾಸಿರ್‌ ಜಂಗ್ ಮತ್ತು ಅನ್ವರುದ್ದಿನ್ ಗೆ ಬೆಂಬಲ ನೀಡಿದರು.


ಯುದ್ದದ ಗತಿ

1. ಮುಜಫರ್‌ ಜಂಗ್‌ ಚಂದಾಸಾಹೇಬ್‌ & ಫ್ರೆಂಚರ ಸಂಯುಕ್ತ ಸೇನೆ 1749 ರಲ್ಲಿ ಅಂಬೂರ ಕದನದಲ್ಲಿ ಅನ್ವರುದ್ದಿನ್ ನ್ನು ಸೋಲಿಸಿ ಕೊಲೆ ಮಾಡಿತು. ಆಗ ಚಂದಾ ಸಾಹೇಬನು ಆಕಾ೯ಟ್ ನವಾಬನಾದನು.

2. ಆರಂಭದಲ್ಲಿ ನಾಸಿರ್‌ ಜಂಗ್‌ ಕೈದರಾಬಾದಿನ ರಾಜನಾದ ಆದರೆ ಡೂಪ್ಲೆನ ಕುತಂತ್ರದಿಂದ 1750 ರಲ್ಲಿ ಕಡಪಾದ ಪಠಾಣನೊಬ್ಬ ನಾಸಿರ ಜಂಗನನ್ನು ಕೊಲೆ ಮಾಡಿದ. ಆಗ ಮುಜಫರ ಜಂಗ್‌ ರಾಜನಾದ

3. ಮುಜಫರ ಜಂಗ್‌ ರಾಜನಾದ ಮೇಲೆ ಫ್ರಂಚ್‌ ಗವರ್ನರ ಡೂಪ್ಲೆ ಬುಸ್ಸಿಯ ನೇತೃತ್ವದಲ್ಲಿ ಸೈನ್ಯದ ಒಂದು ತುಕಡಿಯನ್ನು ಹೈದರಾಬಾದಿನಲ್ಲಿ ಇರಿಸಿದನು.

4. ಕ್ರಿಶ 1751 ರಲ್ಲಿ ಅರಮನೆಯ ಅಂತ: ಕಲಹದಲ್ಲಿ ಮುಜಫರ್‌ ಜಂಗನ ಕೊಲೆಯಾಯಿತು. ಅಗ ಅಸಬ ಜಾನ ಮೂರನೆ ಮಗ ಸಲಾಬತ್‌ ಜಂಗ್‌ ಹೈದರಾಬಾದಿನ ರಾಜನಾದ

5. ಕ್ರಿ.ಶ 1752 ರಲ್ಲಿ ವಾಲಿಕಂಡಪುರಮ೯ (ಪಾಂಡಿಚೇರಿ)  ಬಳಿ ರಾಬಟ್‌೯ ಕ್ವೈವ್‌, ಚಂದಾಸಾಹೇಬ ಮತ್ತು ಡೂಪ್ಲೆಯನ್ನು ಸೋಲಿಸಿದನ್ವಯ, ಓಡಿಹೋಗುತ್ತಿದ್ದ ಚಂದಾ ಸಾಹೇಬನನ್ನು ತಂಜಾವೂರಿನ ರಾಜ ಕೊಲೆ ಮಾಡಿದನು ಆಗ ಅನ್ವರುದ್ದಿನ್‌ ಮಗ ಮಹಮ್ಮದ್‌ ಅಲಿ ಆಕಾ೯ಟ್ ನ್ನು ನವಾಬನಾದನು.

6. ಈಸಂದಭ೯ದಲ್ಲಿ ಸೋತ ಡೂಪ್ಲೆಯನ್ನು ಫ್ರೆಂಚ್‌ ಸಕಾ೯ರ ವಾಪಸ ಕರೆಯಿಸಿಕೊಂಡು ಆತನ ಉತ್ತಧಿಕಾರಿಯಾಗಿ ಗುಡೆಹ್ಯೂನನ್ನು ಗವರ೯ರ್ ಆಗಿ ಕಳುಹಿಸಿತು.‌


ಒಪ್ಪಂದ (ಕ್ರಿ.ಶ 1754)

ಭಾರತಕ್ಕೆ ಬಂದ ಗುಡೆಹ್ಯೂ1754 ರಲ್ಲಿ ಪಾಂಡಿಚೇರಿ ಒಪ್ಪಂದದೊಂದಿಗೆ ಈ ಯುದ್ದವನ್ನು ಕೊನೆಗೊಳಿಸಿದನು.


ಒಪ್ಪಂದದವ ಕರಾರುಗಳು

1. ಎರಡು ಕಂಪನಿಗಳು ಸ್ಥಳಿಯ ಅರಸರ ವಿಚಾರದಲ್ಲಿ ಹಸ್ತಕ್ಷೇಪ ಮಾಡದಿರುವದು.

2. ಯುದ್ದ ಪೂವ೯ ಪ್ರದೇಶಗಳನ್ನು ಹಾಗೂ ಯುದ್ದ ಕೈದಿಗಳನ್ನು ಬಿಟ್ಟು ಕೊಡುವದು.


ಪ್ರಶ್ನೆ 3.    3ನೇ ಕಾನಾ೯ಟಿಕ್‌ ಯುದ್ದ ( ಕ್ರಿ.ಶ 1758- 1763) ಬಗ್ಗೆ ತಿಳಿಸಿ

1. ಯೂರೋಪಿನಲ್ಲಿ ಇಂಗ್ಲೀಷರ & ಫ್ರೆಂಚರ ಮಧ್ಯ ನಡೆದ ಸಪ್ತ ವಾಷಿ೯ಕ ಯುದ್ದವೇ 3 ನೇ ಕಾನಾ೯ಟಿಕ್‌ ಯುದ್ದಕ್ಕೆ ಕಾರಣ.

ಯುದ್ದದ ಗತಿ

1. ಬ್ರಿಟಿಷರ ರಾಬಟ್‌೯ಕ್ಲೈವ್‌ 1757 ರಲ್ಲಿ ಫ್ರೆಂಚ್‌ ನೆಲೆಯಾದ ಚಂದ್ರನಾಗೋರನ್ನು ವಶಪಡಿಸಿಕೊಂಡನು.

2. 1758 ರಲ್ಲಿ ಫ್ರೆಂಚ್ ಗವನ೯ರ್‌ ಕೌಂಟ್‌ - ಡಿ- ಲ್ಯಾಲಿ ಬ್ರಿಟಿಷರ ನೆಲೆಯಾದ ಸೇಂಟ್‌ ದೇವಿಡ್‌ ಕೋಟೆಯನ್ನು ಆಕ್ರಮಿಸಿ ವಶಪಡಿಸಿಕೊಂಡರು.

3.1760 ರಲ್ಲಿ ಗವನ೯ರ್‌ ಕೌಂಟ್‌ - ಟಿ-ಲ್ಯಾಲಿ ಮತ್ತು ಬ್ರಿಟಿಷರ್‌ ಸರ್‌ ಐರ್‌ ಕೂಟ್‌ ಮಧ್ಯ ವಾಂಡಿವಾಷ ಕದನ ನಡೆಯಿತು. ಈ ಕದನದಲ್ಲಿ ಹೈದರಾಬಾದಿನ ಫ್ರೆಂಚ್‌ ದಳಪತಿ ಬುಸ್ಸಿಯನ್ನು ಸೆರೆಹಿಡಿಯಲಾಯಿತು. ಸೋತ ಲ್ಯಾಲಿ ಪಾಂಡಿಚೇರಿಗೆ ಓಡಿ ಹೋದನು.

4. ಹೈದರಾಬಾದಿನ ನವಾಬ ಸಲಾಬತ್ ಜಂಗ್‌ ಫ್ರೆಂಚರ ಪಕ್ಷ ತೊರೆದು ಬ್ರಿಟಿಷರ ಪಕ್ಷ ಸೇರಿದನು.

5. ಈ ವಾಂಡಿವಾಷ್‌ ಕದನದಿಂದ ಫ್ರೆಂಚರ ಅವನತಿ ಆರಂಭವಾಯಿತು.


ಒಪ್ಪಂದ (ಕ್ರಿ.ಶ . 1763)

ಕ್ರಿ.ಶ 1763 ರಲ್ಲಿ ಸಪ್ತವಾಷಿ೯ಕ ಯುದ್ದ ಪ್ಯಾರಿಸ್‌ ಒಪ್ಪಂದದಂತೆ ಕೊನೆಗೊಂಡಿತು. ಅದೇ ಒಪ್ಪಂದದೊಂದಿಗೆ 3 ನೇ ಕಾನಾ೯ಟಿಕ್‌ ಯುದ್ದವು ಮುಕ್ತಾಯವಾಯಿತು.


ಒಪ್ಪಂದದ ಕರಾರುಗಳು

1.ಫ್ರೆಂಚ್ ಪ್ರದೇಶಗಳನ್ನು ಮರಳಿಸಲಾಯಿತು.

2.ಅಲ್ಲಿ ಕೋಟೆ ಕಟ್ಟುವುದನ್ನು ಸೈನ್ಯ ಕಲೆ ಹಾಕುವದನ್ನು ನಿಷೇಧಿಸಲಾಯಿತು.


Popular posts from this blog

Open Blog Test 1 A Mains cum Prelims General Studies

Ancient India 187

69 A 1 Modern India Test Questions