Lecture 51 ಕನ್ನಡ ಮಾಧ್ಯಮ ಪ್ಲಾಸಿ ಕದನ
ಪ್ರಶ್ನೆ 1. ಪ್ಲಾಸಿ ಕದನಕ್ಕೆ ಕಾರಣಗಳ ಬಗ್ಗೆ ತಿಳಿಸಿ
1. ರಾಜಕೀಯ ಕಾರಣ
ಉತ್ಸಾಹಿ ಸ್ವಾತಂತ್ರ್ಯ ಪ್ರೇಮಿಯಾದ ಸಿರಾಜ್ - ಉದ್ - ದೌಲ್ ನಿಗೆ ದೊಡ್ಡಮ್ಮನಾದ ಢಾಕಾದ ಗಸ್ತಿಬೇಗಂ ಇನ್ನೊವ೯ ದೊಡ್ಡಮ್ಮನ ಮಗ ಪೂನಿ೯ಯಾದ ಇನ್ನೊವ೯ ಪೂನಿ೯ಯಾದ ಸುಬೇದಾರ್ ಶೌಕತ್ ಜಂಗ್ ವಿರೋಧಿಗಳಾಗಿದ್ದರು. ಅಲ್ಲದೆ ಅವರಿಗೆ ಉಚ್ಛಾಟಿತ ದಿವಾನ್ ರಾಜವಲ್ಲಭನ ಬೆಂಬಲವೂ ಇತ್ತು. ಸಿರಾಜ್ - ಉದ್ - ದೌಲ್ ನ ವೈರಿಯಾದ ಶೌಕತ್ ಜಂಗ್‌ನನ್ನು ಅಧಿಕಾರಕ್ಕೆ ತರಲು ಬ್ರಿಟಿಷರು ಹವಣಿಸುತ್ತಿದ್ದರು. ಅಲ್ಲದೇ ರಾಜದ್ರೋಹಗಳಾದ ಇವರೆಲ್ಲರಿಗೂ ಬ್ರಿಟಿಷರು ಆಶ್ರಯ ನೀಡಿದ್ದರು.
2. ನವಾಬನ ಅಧಿಕಾರ ಒಪ್ಪದೆ ಇರುವುದು
ಕ್ರಿ.ಶ 1756 ರಲ್ಲಿ ಸಿರಾಜ್-ಉದ್ - ದೌಲ್ ಬಂಗಾಳದ ನವಾಬನ ಅಧಿಕಾರವಹಿಸಿಕೊಂಡಾಗ ಬ್ರಿಟಿಷರು ಬೆಲೆ ಬಾಳುವ ಉಡುಗೊರೆಯನ್ನು ನೀಡಲಿಲ್ಲ. ಇದು ನವಾಬನ ಕೋಪಕ್ಕೆ ಕಾರಣವಾಯಿತು.
3. ಆಥಿ೯ಕ ಕಾರಣ
ಕ್ರಿ.ಶ 1717 ರಲ್ಲಿ ಮೊಗಲ್ ದೊರೆ ಫರುಕಸಿಯಾರ್ನು ಬ್ರಿಟಿಷರಿಗೆ ಬಂಗಾಳದಲ್ಲಿ ಸುಂಕ ರಹಿತ ವ್ಯಾಪಾರ ಮಾಡಲು ಅನುಮತಿ ನೀಡಿದ್ದನು.ಇದರಿಂದಾಗಿ ಬ್ರಿಟಿಷರಿಗೆ ದಸ್ತಕಗಳು ದೊರೆತ್ತಿದ್ದವು. (ದಸ್ತಕಗಳೆಂದರೆ ದುರಪಯೋಗವಾಗಿ ಬಂಗಾಳಕ್ಕೆ ಅಪಾರ ನಷ್ಟವಾಗುತಿತ್ತುಅವ್ಯವಹಾರದಲ್ಲಿ ತೊಡಗಿದವರಿಗೆ ನವಾಬ್ ಶಿಕ್ಷಿಸಲು ಮುಂದಾದಾಗ ಅವರಿಗೆ ಬ್ರಿಟಿಷರು ಆಶ್ರಯ ನೀಡಿದರು ಇದರಿಂದ ನವಾಬ ಕೋಪಗೊಳ್ಳುವಂತಾಯಿತು.
4. ಕಲ್ಕತ್ತಾ ಸುತ್ತ ಕೋಟೆಯನ್ನು ಭದ್ರಪಡಿಸಿದ್ದು
ಕ್ರಿ.ಶ 1756 ರಲ್ಲಿ ಯುರೋಪಿನಲ್ಲಿ ಆರಂಭವಾದ ಸಪ್ತ ವಾಷಿ೯ಕ ಯುದ್ದದಿಂದ ಫ್ರೆಂಚರ್ ಭೀತಿಯಿಂದ ಬ್ರಿಟಿಷರು ಕಲ್ಕತ್ತಾ ಕೋಟೆಯನ್ನು ಭದ್ರಪಡಿಸಿದರು. ಇದರಿಂದ ನವಾಬ ಕೆರಳಿದನು.
5. ಫ್ರೆಂಚರಿಗೆ ಆಶ್ರಯ
ಕ್ರಿ.ಶ 1757 ರಲ್ಲಿ ಬ್ರಿಟಿಷರು ಫ್ರೆಂಚರು ನೆಲೆಯಾದ ಚಂದ್ರಾನಾಗೋರನ್ನು ಆಕ್ರಮಿಸಿ ವಶಪಡಿಸಿಕೊಂಡರು. ಆಗ ನಿರಾಶ್ರಿತರಾದ ಫ್ರೆಂಚರಿಗೆ ಸಿರಾಜ್ - ಉದ್-ದೌಲ್ ಆಶ್ರಯ ನೀಡಿದನು. ಇದು ಬ್ರಿಟಿಷರ ಕೋಪಕ್ಕೆ ಕಾರಣವಾಯಿತು.
6. ಕಪ್ಪು ಕೊಣೆಯ ದುರಂತ
ಕಲ್ಕತ್ತಾದಲ್ಲಿ ನವಾಬನ ವೈರಿಯಾದ ರಾಜವಲ್ಲಭನ ಪರಿವಾರಕ್ಕೆ ಬ್ರಿಟಿಷರು ಆಶ್ರಯ ನೀಡಿದ್ದರು. ರಾಜವಲ್ಲಭನನ್ನು ತನಗೆ ಒಪ್ಪಿಸುವಂತೆ ಬ್ರಿಟಿಷರಿಗೆ ಆದೇಶ ನೀಡಿದಾಗ ಬ್ರಿಟಿಷರು ತಿರಸ್ಕರಿಸಿದರು. ಇದರಿಂದ ಕೋಪಗೊಂಡ ಸಿರಾಜ್ - ಉದ್ -ದೌಲ್ 1756 ಜೂನ್ 16 ರಂದು ಕಾಸಿಂಬಜಾರ ಆಕ್ರಮಿಸಿ ವಶಪಡಿಸಿಕೊಂಡನು.
ಈ ಆಕ್ರಮಣದಲ್ಲಿ ಸೆರೆ ಸಿಕ್ಕ146 ಜನ ಸೈನಿಕರನ್ನು ಜೂನ್ 20 ರಂದು 18 X 14.10 ಅಡಿ ಉದ್ದಗಲದ ಕೊಣೆಯಲ್ಲಿ ಬಂಧಿಸಿಟ್ಟಾಗ 123 ಜನ ಉಸಿರುಗಟ್ಟಿ ಸತ್ತು ಕೇವಲ 23 ಜನ ಮಾತ್ರ ಬದುಕುಳಿದರು. ಇದೇ ಕಪ್ಪು ಕೋಣೆಯ ದುರಂತ . ಇವರಿಂದ ಧೃತಿಗೆಟ್ಟ ಬ್ರಿಟಿಷರು ಅಡ್ಮಿರಲ್ ವ್ಯಾಟ್ಸನ್ ಮತ್ತು ರಾಬಟ೯ ಕ್ಲೈವ್ ನ ನೇತೃತ್ವದ ಸೇನೆ ಕಳುಹಿಸಿ ಮರಳಿ ಕಾಸಿಂಬಜಾರ್ ವಶಪಡಿಸಿಕೊಂಡರು ಆಗ ನವಾಬ ಮತ್ತು ಬ್ರಿಟಿಷರ ಮಧ್ಯ ಒಪ್ಪಂದವಾಯಿತು. ಅದೇ ಆಲಿನಗರ ಒಪ್ಪಂದ ಅಥವಾ ಕಾಸಿಂಬಜಾರ ಒಪ್ಪಂದ.
7. ಒಪ್ಪಂದದ ಕರಾರುಗಳು
1.ಬ್ರಿಟಿಷರಿಗೆ ಹಿಂದೆ ಇದ್ದ ವ್ಯಾಪಾರಿ ಸವಲತ್ತುಗಳನ್ನು ನೀಡುವುದು.
2. ಕೋಟೆ ಕಟ್ಟುವುದಕ್ಕೆ ಅನುಮತಿ ನೀಡುವುದು
3.ಯುದ್ದ ವೆಚ್ಚವನ್ನು ನವಾಬನೇ ತುಂಬಿಕೊಡುವದು
8. ರಾಜಕೀಯ ಒಳಸಂಚು
ಅಲಿನಗರ ಒಪ್ಪಂದದ ನಂತರ ಬ್ರಿಟಿಷರು ಒಳಸಂಚು ನಡೆಸಿದರು. ಸಿರಾಜ್ ಉದ್- ದೌಲ್ ನಿಂದ ಅತೃಪ್ತರಾದ
1. ಮೀರ್ ಜಾಫರ್ (ನವಾಬನ ಸೇನೆಯ ಮುಕಯಸ್ಥ)
2. ರಾಯ್ದುಲಾ೯ಭ (ಖಜಾನೆಯ ಅಧಿಕಾರಿ)
3. ಜಗತ್ ಸೇಠ್ ( ಪ್ರಮುಖ ಬ್ಯಾಂಕರ್)
ಅಲ್ಲದೇ ಗಸ್ತಿಬೇಗಂ ಶೌಕತ್ ಜಂಗ್, ರಾಜವಲ್ಲಭರನ್ನೋಳಗೊಂಡ ಒಂದು ಗುಂಪು ಸಿದ್ದವಾಯಿತು. ಈ ಗುಂಪಿನ ನಾಯಕನಾದ ಮೀರ್ ಜಾಫರ್ನೊಂದಿಗೆ ಬ್ರಿಟಿಷರು ಒಳ ಒಪ್ಪಂದ ಮಾಡಿಕೊಂಡರು
9. ಒಪ್ಪಂದದ ಕರಾರುಗಳು
1. ಸಿರಾಜ್ - ಉದ್- ದೌಲ್ ನೊಂದಿಗೆ ಮಾಡುವ ಯುದ್ದದಲ್ಲಿ ಇವರು ತಟಸ್ಥವಾಗಿರುವುದು.
2. ಯುದ್ದದಲ್ಲಿ ಗೆದ್ದರೆ ಮೀರ್ ಜಾಫರ್ನನನ್ನು ಬಂಗಾಳದ ನವಾಬನನ್ನಾಗಿಸುವುದು.
3. ಯುದ್ದ ವೆಚ್ಚವನ್ನು ಮೀರ್ ಜಾಫರನೇ ತುಂಬಿಕೊಡುವುದು.
ಪ್ರಶ್ನೆ 2. ಪ್ಲಾಸಿಕದನ (ಕ್ರಿ.ಶ 1757 ಜೂನ್ 23) ಬಗ್ಗೆ ತಿಳಿಸಿ
1. ಅಲಿನಗರ ಒಪ್ಪಂದದ ಕರಾರುಗಳನ್ನು ಪಾಲಿಸುತ್ತಿಲ್ಲ ಎಂಬ ನೆಪ ಹೇಳಿದ ಬ್ರಿಟಿಷರು ಬಂಗಾಳದ ನವಾಬನ ಮೇಲೆ ಯುದ್ದ ಸಾರಿದರು.
2. ಕ್ರಿ.ಶ 1757 ಜೂನ್ 23 ರಂದು ಪಶ್ಚಿಮ ಬಂಗಾಳದ ರಾಜ್ಯದ ಪ್ಲಾಸಿ ಎಂಬಲ್ಲಿ ಸಿರಾಜ್ - ಉದ್ - ದೌಲ್ ಮತ್ತು ರಾಬಟ೯ ಕ್ಲೈವ್ ಯುದ್ದ ನಡೆಯಿತು. ಇದೇ ಪ್ಲಾಸಿ ಕದನ
3. ಈ ಕದನದಲ್ಲಿ ಮೀರ್ ಜಾಫರ್ ಮತ್ತು ರಾಯದುಲಾ೯ಭ ತಟಸ್ಥರಾಗಿದ್ದರು. ಆದರೂ ಮೀರ್ ಮದನ್ ಮತ್ತು ಮೋಹನ್ ಲಾಲ್ ನೇತೃತ್ವದ ಸೈನ್ಯ ಹೋರಾಟ ಮಾಡಿದಾಗ ಗಾಬರಿಗೊಂಡ ರಾಬಟ೯ ಕ್ಲೈವ್ ಮಧ್ಯ ಯುದ್ದ ನಡೆಯಿತು. ಇದೇ ಪ್ಲಾಸಿಕದನ
4. ಈ ಕದನದಲ್ಲಿ ಮೀರ್ ಜಾಫರ್ ಮತ್ತು ರಾಯದುಲಾ೯ಭ ತಟಸ್ಥರಾಗಿದ್ದರು. ಆದರು ಮಿರ್ ಮದನ್ ಮತ್ತು ಮೋಹನ್ ಲಾಲ್ ನೇತೃತ್ವದ ಸೈನ್ಯ ಹೋರಾಟ ಮಾಡಿದಾಗ ಗಾಬರಿಗೊಂಡ ರಾಬಟ೯ ಕ್ಲೈವ್ ಸೇನೆಯನ್ನು ಹಿಂದಕ್ಕೆ ಕರೆಯಿಸಿಕೊಂಡು ರಾತ್ರಿ ಮೋಸದಿಂದ ಯುದ್ದ ಮಾಡಿದನು. ಆಗ ಮೀರ್ ಮದನ್ ಗುಂಡೇಟಿಗೆ ಬಲಿಯಾದಾಗ ನವಾಬನ ಸೇನೆ ಚೆಲ್ಲಾಪಿಲ್ಲಿಯಾಗಿ ಸಿರಾಜ್ - ಉದ್ - ದೌಲ್ ನ ಕೊಲೆ ಮಾಡಲಾಯಿತು.
ಪ್ರಶ್ನೆ 3. ಪ್ಲಾಸಿ ಕದನದ ಪರಿಣಾಮಗಳ ಬಗ್ಗೆ ತಿಳಿಸಿ
1. ಈ ಯುದ್ದದ ನಂತರ ಮೀರ್ ಜಾಫರ್ ಬಂಗಾಳದ ನವಾಬನಾದನು.
2. ಇದಕ್ಕೆ ಪ್ರತಿಯಾಗಿ ಮೀರ್ ಜಾಫರ್ 24 ಪರಗಣಗಳ ಜಮೀನ್ದಾರಿಕೆಯ ಹಕ್ಕನ್ನು ಬ್ರಿಟಿಷರಿಗೆ ಕೊಟ್ಟನು.
3. ಈ ಯುದ್ದದಿಂದ ದೊರೆತ ಸಂಪತ್ತನ್ನು ಬಳಸಿಕೊಂಡ ಬ್ರಿಟಿಷರು 3ನೇ ಕಾನಾ೯ಟಿಕ್ ಯುದ್ದದಲ್ಲಿ ಫ್ರೆಂಚರ್‌ನ್ನು ಸೆದೆಬಡೆದರು.
4. ಈ ಯುದ್ದದಿಂದ ಭಾರತದ ಸೈನಿಕರ ದೌಬ೯ಲ್ಯ ಜಗಜ್ಜಾಹಿರವಾಯಿತು.