Lecture 55 ಕನ್ನಡ ಮಾಧ್ಯಮ ಧಾಮಿ೯ಕ ಕಾರಣ , ಸೈನಿಕ ಕಾರಣಗಳು

 ಪ್ರಶ್ನೆ 1.   ಧಾಮಿ೯ಕ ಕಾರಣ ಬಗ್ಗೆ ತಿಳಿಸಿ


     1. ಮತಾಂತರ ನೀತಿ

ಬ್ರಿಟಿಷರು ಹಿಂದೂ ಮುಸಲ್ಮಾರನ್ನು ಒತ್ತಾಯ ಪೂವ೯ಕವಾಗಿ ಮತಾಂತರ ಮಾಡಿದರು. ಇದಕ್ಕಾಗಿ ಹಣಉದ್ಯೋಗ, ಬಡ್ತಿ ಈ ಮುಂತಾದ ಆಮಿಷ ಒಡ್ಡಿದರು. ಅಲ್ಲದೇ ಮತಾಂತರಗೊಂಡವನಿಗೆ ಪಿತ್ರಾಜಿ೯ತ ಆಸ್ತಿಯಲ್ಲಿ ಪಾಲು ಸಿಗುವಂತೆ ಮಾಡಲು ಉತ್ತಾರಾಧಿಕಾರಿ ಕಾನೂನಿಗೆ ತಿದುಪಡಿ ತಂದರು.

2. ಕ್ರೈಸ್ತ ಮಿಷನರಿಗಳ ಪ್ರಚಾರ 

 ಈ ಸಂಸ್ಥೆಗಳು ಸಕಾ೯ರದ ಬೆಂಬಲದಿ೦ದ ಮಿತಿಮೀರಿ ಧಮ೯ ಪ್ರಚಾರ ಮಾಡಿದವು,ಶಾಲೆಯಲ್ಲಿ ಬೈಬಲ್‌ ಪಠಣ ಕಡ್ಡಾಯವಾಯಿತು. ಹಸಿವಿನಿಂದ ಬಳಲುವ ಬಡವರಿಗೆ ಅಕ್ಕಿಯನ್ನು ನೀಡುವುದರ ಮೂಲಕ ಅವರನ್ನು ಕ್ರೈಸ್ತ ಧಮ೯ಕ್ಕೆ ಮತಾಂತರಿಸಿದರು. ಇದನ್ನೆ ರೈಸ್‌ ಕ್ರಿಶ್ಚಿಯಾನಿಟಿ ಎನ್ನುತ್ತಾರೆ.

3. ಅವಹೇಳನ

ಹಿಂದೂ ಧಮ೯ ಗ್ರಂಥಗಳನ್ನು,ಹಿಂದೂ ದೇವತೆಗಲನ್ನು, ಪ್ರವಾದಿ ಮಹಮ್ಮದ್‌ ಪೈಗಂಬರರನ್ನು ಬ್ರಿಟಿಷರು ಅವಹೇಳನ ಮಾಡಿದರು. ಹಿಂದೂ ಧಮ೯ಗ್ರಂಥಗಳನ್ನು ಟೀಕಿಸಿ ಮೆಕಾಲೆ ಲೇಖನಗಳನ್ನು ಪ್ರಕಟಿಸಿದನು. ಇದರಿಂದಾಗಿ ಬ್ರಿಟಿಷ್‌ ವಿರೋಧಿ ಮನೋಭಾವ ಬೆಳೆಯಿತು.


ಪ್ರಶ್ನೆ 2.  ಸೈನಿಕ ಕಾರಣಗಳು ಬಗ್ಗೆ ತಿಳಿಸಿ

ಈ ದಂಗೆಯ ಮೂಲವನ್ನು ನಾವು ಸೈನ್ಯದಲ್ಲಿಯೇ ಕಾಣುತ್ತೇವೆ.

1.ಭಾರತದಲ್ಲಿ ಬ್ರಿಟಿಷರು ತಮ್ಮ ಸಾಮ್ರಾಜ್ಯವನ್ನು ಕಟ್ಟಿದ್ದು ಭಾರತೀಯ ಸೈನಿಕರಿಮದಲೇ ಆದರೂ ಅವರು ಭಾರತೀಯ ಸೈನಿಕರನ್ನು ನಿಗ್ಗರ್‌,ಸುವ್ವರ್‌ ಎಂದು ಮೂದಲಿಸುತ್ತಿದ್ದರು.

2. ಭಾರತೀಯ ಸೈನಿಕರಿಗಿಂತ ಬ್ರಿಟಿಷ್‌ ಸೈನಿಕರ ಸಂಬಳ ಎಂಟು ಪಟ್ಟು ಹೆಚ್ಚಾಗಿತ್ತು ಇದರಿಂದ ಭಾರತೀಯ ಸೈನಿಕರು ಅಸಂತೃಪ್ತರಾಗಿದ್ದರು.

3. ಭಾರತೀಯ ಸೈನಿಕರು ವಿದೇಶಗಳಲ್ಲಿ ಸೇವೆಸಲ್ಲಿಸಬೇಕಿತ್ತು ಆದರೆ ಇದಕ್ಕೆ ವಿಶೇಷ ಭತ್ಯೆ ಇರಲಿಲ್ಲ.

ಕ್ರಿಶ 1856 ರಲ್ಲಿ ಲಾಡ್‌೯ ಕ್ಯಾನಿಂಗ್‌ ಜನರಲ್‌ ಸವಿ೯ಸ್‌ ಎನ್ಲಿಸ್ಟ್ ಮೆಂಟ್‌ ಎಂಬ ಕಾಯಿದೆಯನ್ನು ಪಾಸು ಮಾಡಿ, ಸೈನಿಕರು ವಿದೇಶಗಳಲ್ಲಿ ಸೇವೆ ಸಲ್ಲಿಸುವುದನ್ನು ಕಡ್ಡಾಯಗೊಳಿಸಿದನು. ಇದರಿಂದ ತಮ್ಮ ಧಮ೯ ಕೆಡುವುದೆಂಬ ಭೀತಿಯಿಂದ ಸೈನಿಕರು ದಂಗೆ ಏಳಲು ಹವಣಿಸುತ್ತಿದ್ದರು.


ಪ್ರಶ್ನೆ 3. ತತ್ ಕ್ಷಣದ ಕಾರಣ  ಬಗ್ಗೆ ತಿಳಿಸಿ

1.ಬ್ರಿಟಿಷರು ಭಾರತೀಯ ಸೈನಿಕರಿಗೆ ಹೊಸ ಎನ್ ಫೀಲ್ಡ್‌ ಬಂದೂಕಗಲನ್ನು ನೀಡಿದ್ದರು, ಅ ಬಂದೂಕಿನ ತೋಟಾಗಳಿಗೆ ಶಾಖ ನಿರೋಧಕವಾಗಿ ಕೊಬ್ಬನ್ನು ಸವರಿ ಮೇಲೆ ಅಂಟಿಸಲಾಗಿತ್ತು ಆದರೆ ಅದನ್ನು ಬಾಯಿಯಿಂದ ಕಿತ್ತಬೇಕಿತ್ತು, ಅದಕ್ಕೆ ಸವರಿದ ಕೊಬ್ಬು ಹಸುವಿನ ಮತ್ತು ಹಂದಿಯ ಮಾಂಸ ಎಂಬ ಸುದ್ದಿ ಹರಡಿ ಸೈನಿಕರು ಬಂದೂಕನ್ನು ಮುಟ್ಟಲು ನಿರಾಕರಿಸಿದರು. ಆಗ ಅವರ ಮೇಲೆ ಕ್ರಮ ಜರುಗಿಸಲು ಮುಂದಾದಾಗ ದಂಗೆ ಸ್ಫೋಟಗೊಂಡಿತು.

2. 1857 ಮಾಚ್‌೯ 29 ರಂದು ಬಂಗಾಳದ ಬ್ಯಾಕರ್ಪುರ್ದಲ್ಲಿ ಮಂಗಲಪಾಂಡೆ ಎಂಬ ಸೈನಿಕ ಕೊಬ್ಬು ಸವರಿದ ಬಂದೂಕನ್ನು ಮುಟ್ಟಲು ತಿರಸ್ಕರಿಸಿ ದಂಗೆ ಎದ್ದು ಬ್ರಿಟಿಷ್‌ ಅಧಿಕಾರಿ ಮೇಜರ್‌ಹಡ್ಸನ್ ನನ್ನು ಕೊಂದು ಕನ೯ಲ್‌ ಬಾ ಎಂಬ ಅಧಿಕಾರಿಯನ್ನು ಗಾಯಗೊಳಿದನು.

3.ಈತನನ್ನು  ಬಂಧಿಸಿದ ಬ್ರಿಟಿಷ್ ರು ಕ್ರಿ.ಶ 1857 ಏಪ್ರಿಲ್‌ 8 ರಂದು ಗಲ್ಲಗೇರಿಸಿದರು.

4. ಮೇ 10 ರಂದು ಮೀರತ್ನಲ್ಲಿ 87 ಜನ ಸೈನಿಕರು ಬಂದೂಕನ್ನು ಮುಟ್ಟಲು ನಿರಾಕರಿಸಿದಾಗ ಅವರನ್ನು ಸೇವೆಯಿಂದ ವಜಾಗೊಳಿಸಿ ಜೈಲಿಗೆ ತಳ್ಳಲಾಯಿತು. ಆಗ ಉಳಿದ ಜನ ಸೈನಿಕರು ಕದಮ್‌ ಸಿಂಗ್ ನ ನೇತೃತ್ವದಲ್ಲಿ ಜೈಲಿಗೆ ನುಗ್ಗಿ ಸೈನಿಕರನ್ನು ಬಿಡಿಸಿಕೊಂಡು ಮಾರೋಫಿರಂಗಿ ಕೋ ಎಂಬ ಘೋಷ ವಾಕ್ಯದೊಂದಿಗೆ ಕಂಡ  ಯುರೋಪಿಯನ್ನರನ್ನು ಕೋಲ್ಲುತ್ತಾ ದೆಹಲಿಯತ್ತ ನುಗ್ಗಿದರು.

5. ಮೇ 12 ರಂದು 2ನೇ ಬಹುದ್ದೂರ ಷಾನನ್ನು ಭಾರತದ ಚಕ್ರವತಿ೯ ಎಂದು ಘೋಷಿಸಿದರು.


Popular posts from this blog

Open Blog Test 1 A Mains cum Prelims General Studies

Ancient India 187

69 A 1 Modern India Test Questions