Lecture 56 ಕನ್ನಡ ಮಾಧ್ಯಮ ದಂಗೆಯ ಪರಿಣಾಮಗಳು

ಪ್ರಶ್ನೆ 1.   ದಂಗೆಯ ದಮನ ಬಗ್ಗೆ ತಿಳಿಸಿ 

1. ಸೆಪ್ಟೆಂಬರ್‌ 20 ರಂದು ಜಾನ್ನಿಕೋಲ್ಸನ್‌ ದೆಹಲಿಯನ್ನು ವಶಪಡಿಸಿಕೊಂಡನು. ಆಗ ಭಕ್ತಖಾನ ಓಡಿ ಹೋದನು.

2. ಸೆಪ್ಟಂಬರ್‌ 21 ರಂದು ಹಡ್ಸನ್‌ ಎಂಬ ಅಧಿಕಾರಿ 2ನೇ ಬಹುದ್ದೂರ್‌ ಷಾ ನ ಮಗನನ್ನು ಮೊಮ್ಮಕ್ಕಳ್ಳನ್ನು ಅವನೆದುರಿನಲ್ಲಿಯೇ ಗುಂಡಿಟ್ಟು ಕೊಂದನು.

2ನೆ ಬಹುದ್ದೂರ್‌ ಷಾ ನನ್ನು ರಂಗೂನಿಗೆ ಗಡಿ ಪಾರು ಮಾಡಿ ಮಾಂಡಲೆ ಜಯಲಿನಲ್ಲಿ ಇರಿಸಿದರು. ಕ್ರಿ.ಶ 1862 ರಲ್ಲಿ ಅಲ್ಲಿಯೇ ಮರಣ ಹೊಂದಿದನು. ಇಲ್ಲಿಗೆ ಮೊಗಲ್‌ ಸಾಮ್ರಾಜ್ಯ ಅಂತ್ಯವಾಯಿತು.

3. ನಾನಾ ಸಾಹೇಬ (ಥೋಂಡೊಪಂಥ), ತ್ಯಾಂತ್ಯಾಟೋಪಿ (ರಾಮಚಂದ್ರ ಭಟ್)‌ ಹೋರಾಡಿದರೂ ಜನರಲ್‌ ಹ್ಯಾವಲಾಕ್‌ ಕಾನಪುರನ್ನು ವಶಪಡಿಸಿಕೊಮನು. ಆಗ ನಾನಾಸಾಹೇಬ ನೇಪಾಳಕ್ಕೆ ಓಡಿಹೋದನು.

4. ತ್ಯಾಂತ್ಯಾಟೋಪಿ ಕಾನ್ಪುರನ್ನು ಮರಳಿ ವಶಪಡಿಸಿ ಕೊಂಡರೂ ಕ್ಯಾಂಪಬೆಲ್ ನ  ಎದುರು ಸೋತು ಝಾನ್ಸಿಗೆ ಹೋಗಿ ಲಕ್ಷೀಭಾಯಿಯೊಂದಿಗೆ ಸೇರಿ ಹೋರಾಟ ಮಾಡುತ್ತಿರುವಾಗ ದ್ರೋಹಿ ಗೆಳೆಯ ಮಾನಸಿಂಗ್‌ನ ಕುತಂತ್ರದಿಂದ ಬ್ರಿಟಿಷರಿಗೆ ಸೆರೆಯಾದನು.

5. ಆತನನ್ನು ಕ್ರಿ.ಶ 1859 ಏಪ್ರಿಲ್‌ 09 ರಂದು ಕ್ಯಾಂಪೆಬೆಲ್‌ ಗಲ್ಲಿಗೇರಿಸಿದನು.

6.ಝಾನ್ಸಿರಾಣಿ ಲಕ್ಷೀಭಾಯಿ (ಮಣಿಕಣಿ೯ಕಾ) 1858 ಜೂನ್‌ 18 ರಂದು ಹೋರಾಡುತ್ತಲೇ ವೀರ ಮರಣ ವನ್ನಪ್ಪಿದಳು.

7. 1858 ಜುಲೈ 8 ರಂದು ಲಾಡ್‌೯ ಕ್ಯಾನಿಂಗ್‌ ಭಾರತದಾದ್ಯಂತ ಶಾಂತಿಯನ್ನು ಘೋಷಣೆ ಮಾಡಿದನು.


ಪ್ರಶ್ನೆ 2. ದಂಗೆಯ  ಪರಿಣಾಮಗಳು ಬಗ್ಗೆ ತಿಳಿಸಿ

1.ಕ್ರಿ.ಶ 1857 ರ ದಂಗೆಯ ನಂತರ ಭಾರತದ ಅಡಳಿತದಲ್ಲಿ ಹಲವಾರು ಬದಲಾವಣೆಗಳಾದವು.

2.ಭಾರತದ ಆಡಳಿತದ ರೂಪುರೇಖೆಗಳನ್ನು ತಿಳಿಸುವ ವಿಕ್ಟೊರಿಯ ಮಹಾರಾಣಿಯ ಘೋಷಣೆಯಾಯಿತು,ಆ ಘೋಷಣೆಯನ್ನು ಲಾಡ್‌೯ ಕ್ಯಾನಿಂಗ್‌ 1858 ನವೆಂಬರ್‌ 1 ರಂದು ಅಲಹಾಬಾದನಲ್ಲಿ ಪ್ರಕಟಿಸಿದನು.

3. ಈ ಕಾಯ್ದೆಯನ್ನು ಭಾರತದ ಅಡಳಿತದ ವ್ಯವಸ್ಥೆಯ ಮ್ಯಾಗ್ನಾಕಾಟ೯ ಎನ್ನುತ್ತಾರೆ.

4. ಈ ಕಾಯ್ದೆಯಂತೆ ಭಾರತದಲ್ಲಿ ದತ್ತು ಸ್ವೀಕಾರಕ್ಕೆ ಅನುಮತಿ ನೀಡಲಾಯಿತು.

5. ಭಾರತದ ಮತ, ಧಮ೯, ಸಂಸ್ಕೃತಿಗಳನ್ನು ಗೌರವಿಸಿ ಅದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ತಿಳಿಸಿತು.

6. ಕಂಪನಿಯ ಆಳ್ವಿಕೆ ಅಂತ್ಯಗೊಂಡು ಭಾರತವು ಬ್ರಿಟಿಷ ಪಾಲಿ೯ಮೆಂಟಿನ ನೇರ ಆಡಳಿತಕ್ಕೆ ಒಳಪಟ್ಟಿತು.

7. ಭಾರತದ ಆಡಳಿತವನ್ನು ನೋಡಿಕೊಳ್ಳಲು ಇಂಗ್ಲೇಂಡ್ನಲ್ಲಿ ರಾಜ್ಯ ಕಾಯ೯ದಶಿ೯ ಹುದ್ದೆಯನ್ನು ಸೃಷ್ಟಿಲಾಯಿತು. ಅಲ್ಲದೇ ಇತನಿಗೆ ಸಲಹೆ ನಿಡಲು 15 ಜನರ ಸಲಹಾ ಮಂಡಳಿಯನ್ನು ರಚಿಸಲಾಯಿತು.

8. ಗವನ೯ರ ಜನರಲ್‌ ಹುದ್ದೆಯ ಬದಲಾಗಿ ವೈಸರಾಯ್‌ ಹುದ್ದೆಯನ್ನು ಸೃಷ್ಟಿಸಲಾಯಿತು.

9. ಲಾಡ್‌೯ ಕ್ಯಾನಿಂಗ್‌ ಭಾರತದ ಕೊನೆಯ ಗವನ೯ರ ಜನರಲ್‌ ಆಗಿದ್ದು, ಮೊದಲ ವೈಸರಾಯನಾಗಿ ನೇಮಕವಾದನು.


ಪ್ರಶ್ನೆ 3.   ದಂಗೆಯ ಸ್ವರೂಪ ಬಗ್ಗೆ ತಿಳಿಸಿ

1. ಭಾರತೀಯ ಮತ್ತು ಪಾಶ್ಚಾತ್ಯ ವಿದ್ವಾಂಸರು ಈ ದಂಗೆಯ ಸ್ವರೂವನ್ನು ಕುರಿತು ತಮ್ಮದೇ ಅದ ವ್ಯಾಖ್ಯಾಗಳನ್ನು ನಿಡಿದ್ದಾರೆ. 

2. ವಿ.ಎ. ಸ್ಮಿತ್‌ - ಇದು ಸಮಪುಣ೯ವಾಗಿ ಸಿಪಾಯಿದಂಗೆ ಭಾಗಶ: ಜನರ ಬಂಡಾಯ.

3. ಆರ್‌, ರೀಸ್‌ - ಇದು ಕ್ರೈಸ್ಥರ ವಿರುದ್ದ ಹೂಡಿದ ಧಾಮಿ೯ಕ ಯುದ್ದ

4. ವಿ.ಡಿ.ಸಾವಕ೯ಕರ್‌ - ಇದು ಭಾರತದ ಪ್ರಪ್ರಥಮ ಸ್ವಾತಂತ್ರ್ಯ ಸಮಗ್ರಾಮ.

5. ಆರ್.‌ ಸಿ. ಮುಜುಮದಾರ್‌ - ಈ ದಂಗೆಯು ಭಾರತದ ಸವಾತಂತ್ರ್ಯ ಸಂಗ್ರಾಮವಾಗಿರಲಿಲ್ಲ.

6. ಕೆ.ಎಂ. ಫಣಿಕ್ಕರ್‌ - ಬ್ರಿಟಿಷರ ಪ್ರಭುತ್ವದವನ್ನು ಕಿತ್ತೋಗೆಯಲು ನಡೆದ ರಾಷ್ಟ್ರೀಯ ವಿಮೋಚನಾ ಚಳುವಳಿ.


 


Popular posts from this blog

Open Blog Test 1 A Mains cum Prelims General Studies

Ancient India 187

69 A 1 Modern India Test Questions