Lecture 9 ಕನ್ನಡ ಮಾಧ್ಯಮ ಭಾರತದ ಮೇಲೆ ವಿದೇಶಿಯರ ದಾಳಿಗಳು
ಭಾರತದ ಮೇಲೆ ವಿದೇಶಿಯರ ದಾಳಿಗಳು
ಪ್ರಶ್ನೆ 1. 1ನೇ ಸೈರಸ್ ಕ್ರಿ.ಪೂ 558-530 ಬಗ್ಗೆ ತಿಳಿಸಿ
ಈತ ಪಷಿ೯ಯಾದಲ್ಲಿ ಪ್ರಬಲವಾದ ಮತ್ತು ಏಕೀಕೃತವಾದ ಮನೆತನವನ್ನು ನಿಮಿ೯ಸಿದನು. ಈ ಮನೆತನವನ್ನು ಅಖೇಮಿಯನ್ ಮನೆತನ (ಸಾಮ್ರಾಜ್ಯ) ಎಂದು
ಕರೆಯುತ್ತಾರೆ.
2. ಈತ ಅಪಘಾನಿಸ್ತಾನದ ತಕ್ಷಶಿಲೆ (ಸಿಂಧ್) ಮತ್ತು ಭಾರತದ ಪಂಜಾಬ ಪ್ರಾಂತ್ಯಗಳ ಮೇಲೆ ದಾಳಿ ಮಾಡಿದನು.
ಪ್ರಶ್ನೆ 2. 1ನೇ ಡೇರಿಯಸ್ ಕ್ರಿ.ಪೂ 522- 486 ಬಗ್ಗೆ ತಿಳಿಸಿ
1. 1ನೇ ಸೈರಸ್ ನ ಮೊಮ್ಮಗನಾಗಿದ್ದಾನೆ.
2. ಭಾರತದ ಸಿಂಧ್ ಮತ್ತು ಪಂಜಾಬ ಪ್ರಾಂತ್ಯಗಳ ಮೇಲೆ ದಾಳಿ ಮಾಡಿದನು.
3. ಕ್ರಿ.ಪೂ 518 ರಲ್ಲಿ ಸಿಂಧ್ ಪ್ರಾಂತ್ಯವನ್ನು ವಶಪಡಿಸಿ ಕೊಂಡನು ಇದು ಡೇರಿಯಸ್ 20ನೇ ಪ್ರಾಂತ್ಯವಾಗಿತ್ತು
4. ಸಿಂಧ್ ಪ್ರಾಂತ್ಯದಿಂದ ವಾಷಿ೯ಕವಾಗಿ 1 ಕೋಟಿ ರೂ. ಮೌಲ್ಯದ ಚಿನ್ನದ ಪುಡಿಯನ್ನು ಪಷಿ೯ಯಾ ದೇಶಕ್ಕೆ ಕಪ್ಪ ನೀಡುತ್ತಿದ್ದನೆಂದು ಜೆನೋಪೆನ್ ಎಂಬಗ್ರೀಕ್ ಬರಹಗಾರನಿಂದ ತಿಳಿದು ಬರುತ್ತದೆ.
5. ಭಾರತದ ಸಿಂಧ್ ಪ್ರಾಂತ್ಯವು 20 ನೇ ಸತ್ರಪಿ ( ಪ್ರಾಂತ್ಯ)ವಾಗಿತ್ತೆಂದು ಅವನ ಎರಡು ಶಾಸನಗಳಾದ
1. ಪಸೇ೯ ಪೋಲೀಸ್
2. ನಕ್ಷಂ ಐ ರುಸ್ತುಂ ಎಂಬ ಶಾಸನಗಳಿಂದ ತಿಳಿದು ಬರುತ್ತದೆ.
3. ಈತ ಜರಾ ತುಷ್ಟ ಸ್ಥಾಪಿಸಿದ ಜೋರಾಸ್ಟ್ರೀಯನ್ ಧಮ೯ವನ್ನು ತನ್ನ ರಾಜ್ಯದ ಧಮ೯ವನ್ನಾಗಿ ಮಾಡಿಕೊಂಡಿದ್ದನು.
4. ಈ ಧಮ೯ವು ಜೀವನವು ಒಳಿತು ಮತ್ತು ಕೆಡಕುಗಳ ನಡುವಿನ ನಿರಂತರವಾದ ಹೋರಾಟದ ರಂಗ ಎಂದು ಹೇಳಿದೆ.
5. ಈ ಧಮ೯ದ ಒಳಿತಿನ ದೇವರು - ಅಹುರ್ ಮಜ್ದಾ
6. ಈ ಧಮ೯ದ ಕೆಡಕಿನ ದೇವರು - ಅಹೀರ್ ಮಾನ್
7. ಪಷಿ೯ಯಾದಿಂದ ಭಾರತಕ್ಕೆ ಬಂದ ಎಲ್ಲಾ ವಲಸಿಗರು ತಾವು ಪಾಸಿ೯ಗಳೆಂದುಹೇಳಿಕೊಂಡರು.
8.ಈ ಜೋರಾಸ್ಟ್ರಿಯನ್ ಧಮ೯ವೇ ಮುಂದೆ ಪಾಸಿ೯ಗಳ ಧಮ೯ವಾಗಿ ಪರಿವತ೯ನೆಯಾಯಿತು.
9. ಪಾಸಿ೯ಯನ್ನರು ಪವಿತ್ರ ಗ್ರಂಥ ಝಂಡಾ ಅವೆಸ್ತಾ
ಪ್ರಶ್ನೆ 3. 1ನೇ ಕ್ಸರಕ್ಸಸ್ ಕ್ರಿ.ಪೂ 486-465 ಬಗ್ಗೆ ತಿಳಿಸಿ
1.ಈತ ಭಾರತದ ಒಳ ರಾಜ್ಯಗಳರೆಗೂ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿ ಭಾರತೀಯರನ್ನು ತನ್ನ ಆಡಳಿತದಲ್ಲಿ ಸೈನಿಕರನ್ನಾಗಿ ನೇಮಿಸಿಕೊಂಡನು.
2. ಈತನ ಆಡಳಿತದಲ್ಲಿ ಭಾರತೀಯ ಸೈನಿಕರ ಗುಂಪಿಗೆ ಗಾಂಧಾರಿಯನ್ನರು ಎಂದು ಕರೆಯುತ್ತಿದ್ದರು.
ಮ್ಯಾಸಿಡೋನಿಯಾದ ಗ್ರೀಕರು