Lecture 32 ಕನ್ನಡ ಮಾಧ್ಯಮ ಬಾಬರ್
ಪ್ರಶ್ನೆ 1. ಬಾಬರ್ ಕ್ರಿ.ಶ. 1526-1530
1.ಮೊಘಲ ಸಾಮ್ರಾಜ್ಯದ ಸ್ಥಾಪಕ, ಇವನ ಮೂಲ ಹೆಸರು ಜಹಿರ್ - ಉದ್ - ದಿನ್- ಮಹಮ್ಮದ್
2. ಕ್ರಿ.ಶ 1483 ಫೆಬ್ರವರಿ 14 ರಂದು ಮಧ್ಯ ಏಷ್ಯಾದ ಪಗಾ೯ನ್ ಎಂಬ ಪ್ರಾಂತ್ಯದಲ್ಲಿ ಜನಿಸಿದನು
3. ಈತನ ತಂದೆ - ಉಮರ ಶೇಖ್ ಮಿಜಾ೯ (ತೈ ಮೂರನ ವಂಶಸ್ಥನಾಗಿದ್ದ) ತಾಯಿ - ಕುತ್ಲುಗ ನಿಗಾರ್ ಖಾನುಬಾನು ಬೇಗಂ (ಮಂಗೋಲರ ಚಂಗಿಸ್ ಖಾನನ್ ವಂಶಸ್ಥಳು)
4. ಕ್ರಿ.ಶ 1497 ರಲ್ಲಿ ಮಧ್ಯ ಏಷ್ಯಾದ ಸಮರ ಖಂಡ ವಶಪಡಿಸಿಕೊಂಡು 100 ದಿನಗಳ ಕಾಲ ಆಡಳಿತ ಮಾಡಿದನು.
5. ಈ ಸಂದಭ೯ದಲ್ಲಿ ಟ್ರಾನ್ಸ ಆಕ್ಸಿಯಾ ಎಂಬ ಪ್ರದೇಶದಲ್ಲಿ 111 ವಷ೯ದ ವೃದ್ದೆಯೊಬ್ಬಳು ತೈಮೂರನು ಭಾರತದಿಂದ ತಂದ ಸಂಪತ್ತಿನ ಬಗ್ಗೆ ಸವಿವರವಾದ ಕಥೆಯನ್ನುಹೇಳಿದಳು. ಆಗ ಬಾಬರ ಮಸಿದಿಯ ಏಷ್ಯಾದ ಆಡಳಿತ ಬಿಟ್ಟು ಹಿಂದೂ ಸ್ಥಾನದ ಕಡೆ ಗಮನ ಹರಿಸಿದನು.
6. ಬಾಬರನಿಗೆ ಭಾರತಕ್ಕೆ ಬರಲು ಆಹ್ವಾನ ನೀಡಿದವರು ಆಲಂಖಾನ್, ದೌಲತಾಖಾನ್ ಮತ್ತು ರಾಣಾ ಸಂಗ್ರಾಮ ಸಿಂಗ್
ಪ್ರಶ್ನೆ 2. ಬಾಬರ ಭಾರತದಲ್ಲಿ ಕೈಗೊಂಡ ಸರಣಿ ಯುದ್ದಗಳು ಯಾವುವು?
1. ಕ್ರಿ.ಶ. 1526 : ಬಾಬರ ಇಬ್ರಾಹಿಂ ಲೋದಿಯ ಮಧ್ಯ ಮೊದಲ ಪಾಣಿಪತ್ ಕದನ ನಡೆಯಿತು, ಇದರಲ್ಲಿ ಇಬ್ರಾಹಿಂ ಲೋದಿ ಸೋತು ಕೊಲೆಯಾದನು.
2. ಕ್ರಿಶ 1527 : ಬಾಬರ ಮತ್ತು ರಾಣಾ ಸಂಗ್ರಾಮ ಸಿಂಗ್ ನ ಮಧ್ಯ ಕಣ್ವ ಕದನ ನಡೆಯಿತು. ಇದರಲ್ಲಿ ರಾಣಾ ಸಂಗ್ರಾಮ ಸೋತು ಓಡಿಹೋದನು.
3. ಕ್ರಿ.ಶ 1528 ರಲ್ಲಿ: ಬಾಬರನು ಮಾಳ್ವದ ಅರಸ ಮೇದಿನಿರಾಯನನ್ನು ಚಂದೇರಿ ಕಾಳಗದಲ್ಲಿ ಸೋಲಿಸಿದನು.
4. ಕ್ರಿ.ಶ 1529 ರಲ್ಲಿ ಗೋಗ್ರಾ ಕದನದಲ್ಲಿ ಇಬ್ರಾಹಿಂ ಲೋದಿಯ ಸಂಬಂದಿಕರಾದ ಮಹಮ್ಮದ ಲೋದಿಯನ್ನು ಸೋಲಿಸಿದನು.
5. ಕ್ರಿ.ಶ 1530 ರಲ್ಲಿ ಬಾಬರ ಮರಣ ಹೊಂದಿದನು
6. ಈತನ ಸಮಾಧಿ ಪ್ರಸ್ತುತ ಕಾಬೂಲಿನಲ್ಲಿದೆ.
7. ಬಾಬರ ತುಕಿ೯ ಅಥವಾ ಚಗಟಾಯಿ ತುಕಿ೯ ಭಾಷೆಯಲ್ಲಿ ತನ್ನ ಅತ್ಮ ಚರಿತ್ರೆಯಾದ ತುಜಕ್ - ಇ- ಬಾಬರು ಅಥವಾ ಬಾಬರನಾಮಾ ಎಮಬ ಗ್ರಂಥವನ್ನು ಬರೆದನು.
8. ಬಾಬರ ಭಾರತಕ್ಕೆ ತೋಪು ಮತ್ತು ಗುಲಾಬಿ ಹೂಗಳನ್ನು ಪರಿಚಯಿಸಿದನು.
9. ತುಕಿ೯ ಭಾಷೆಯಲ್ಲಿ ಬಾಬರ ಎಂದರೆ ಹುಲಿ ಎಂದಥ೯.