Lecture 10 ಕನ್ನಡ ಮಾಧ್ಯಮ ಅಲೆಗ್ಸಾಂಡರ್‌

 ಪ್ರಶ್ನೆ 1.      ಅಲೆಗ್ಸಾಂಡರ್‌ ಕ್ರಿ.ಪೂ 336-323



1.ತಂದೆ- ಎರಡನೇ ಪಿಲಿಫ್‌

2. ತಾಯಿ - ಒಲಂಪಿಯಾ

3.ಗುರು - ಅರಿಸ್ಟಾಟಲ್‌

4. ಅಲೆಕ್ಸಾಂಡರ್‌ ನ  ಪ್ರೀತಿಯ ವಸ್ತುಗಳು ಖಡ್ಗ ಮತ್ತು ಹೋಮರ್‌ ಬರೆದ ಇಲಿಯಡ್‌ ಮತ್ತು ಓಡಿಸ್ಸಿ ಎರಡು ಮಹಾಕಾವ್ಯಗಳು.

5. ಕ್ರಿ.ಪೂ 330 ರಲ್ಲಿ ಪಷಿ೯ಯಾ ದೇಶವನ್ನು ಸೋಲಿಸಿ ಎಡೀ ಜಗತ್ತನ್ನೇ ತನ್ನ ಚಕ್ರಾದಿಪತ್ಯಕ್ಕೆ
 ಒಳಪಡಬೇಕೆಂಬ ಉದ್ದೇಶ ಹೊಂದಿದ್ದನು.

6. ಕ್ರಿ.ಪೂ 327 ರಲ್ಲಿ ಭಾರತದ ಮೇಲೆ ದಾಳಿ ಮಾಡಿದನು.

7. ಭಾರತದಲ್ಲಿ ಅಲೆಕ್ಸಾಂಡರನಿಗೆ ಶರಣಾದ ತಕ್ಷ ಶಿಲೆಯ ದೊರೆ ಅಂಬಿ.

8.ಕ್ರಿ.ಪೂ 326 ರಲ್ಲಿ ಅಲೆಕ್ಸಾಂಡರ ಮತ್ತು ಭಾರತದ ಅರಸ ಪೌರವನ ಮಧ್ಯ ಜೀಲಂ ನದಿಯ ದಂಡೆಯ ಮೇಲೆ ಪ್ರಸಿದ್ಧವಾದ ಹೈಡಾಸ್ಟಸ್‌ ಕದನ ಅಥವಾ ಜೀಲಂ ನದಿ ಕಾಳಗ ನಡೆಯಿತು. ಈ ಕದನದಲ್ಲಿ ಪೌರವನ ಮಗ ಹಿರಿವಮ೯ನ ಕೊಲೆಯಾಯಿತು. ಪೌರವ ಸೋತು ಅಲೆಕ್ಸಾಂಡರನಿಗೆ ಶರಣಾದನು.

9. ಕ್ರಿ.ಪೂ 323 ರಲ್ಲಿ ತನ್ನ ದೇಶಕ್ಕೆ ಹೋಗುವಾಗ ಬ್ಯಾಬಿಲೊನಿಯಾ ಎಂಬ ಪ್ರಾಂತ್ಯದಲ್ಲಿ ಗ್ಯಾಂಗ್ರಿನ್‌ ಎಂಬ ಚಮ೯  ಕೊಳೆಯುವ ರೋಗಕ್ಕೆ ಬಲಿಯಾದನು.

   ಪ್ರಶ್ನೆ 2.   ವಿಶೇಷ ಅಂಶಗಳು ಯಾವುವು?

1. ಅಲೆಕ್ಸಾಂಡರ ಈಜಿಪ್ತನಲ್ಲಿ ಅಲೆಗ್ಸಾಂಡ್ರಿಯಾ ಎಂಬ ನಗರ ಮತ್ತು ಗ್ರೀಕರ ಟಾಲೆಮಿಯ ಮನೆತನವನ್ನು ವಶಪಡಿಸಿಕೊಂಡನು.

2. ಅಲೆಕ್ಸಾಂಡರ ಭಾರತದಲ್ಲಿ ಒಟ್ಟು 27 ತಿಂಗಳುಗಳ ಕಾಲ ಇದ್ದನು.

3. ಅಲೆಕ್ಸಾಂಡರನ ಕುದುರೆಯ ಹೆಸರು - ಬುಕ್ಕೆಪಾಲಸ್‌

4. ಭಾರತ ದೇಶದ ಮೊದಲ ದೇಶದ್ರೋಹಿ ಅರಸ ಅಂಬಿ.

Popular posts from this blog

Open Blog Test 1 A Mains cum Prelims General Studies

Ancient India 187

69 A 1 Modern India Test Questions